Art
Events
Literature
Music
Theatre

Next  

 • file6x0uv00dr5417ml9bkan

  ‘ಭಾಳ ಛಂದ ಹಾಡಿದೀಯವ್ವಾ…’ - ಶ್ರೀಪಾದ ಜೋಶಿ ಅದು 1984ನೇ ಇಸವಿ. ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಹಾಡುಗಾರಿಕೆಗೆ ಹಾರ್ಮೋನಿಯಂ ಸಾಥ್‌ ನೀಡಬೇಕಿದ್ದ ದಿವಂಗತ ವಸಂತ ಕನಕಾಪುರ ಅವರು ಅಂದು ಕಾರಣಾಂತರಗಳಿಂದ ಬಂದಿರಲಿಲ್ಲ. ತಬಲಾ (ರಘುನಾಥ್ ನಾಕೋಡ) ಮತ್ತು ತಂಬೂರಿಯ ಸಾಥ್‌ನೊಂದಿಗೆ ಹಾಡು ಕೇಳಿ ಬರುತ್ತಿತ್ತು. ಹಾಡಿನ ಜತೆ ಹಾರ್ಮೋನಿಯಂ ಏಕೆ ಕೇಳಿ ಬರುತ್ತಿಲ್ಲ ಎಂದು ಚಿಂತೆಗೀಡಾದರು ಹಿರಿಯ ಹಿಂದೂಸ್ತಾನಿ ಗಾಯಕ ಮಲ್ಲಿಕಾರ್ಜುನ ಮನಸೂರ. ತಾವು ಕೇಳುತ್ತಿದ್ದ ರೇಡಿಯೊ ಹಿಡಿದುಕೊಂಡೇ ಆಕಾಶವಾಣಿಯ ಸ್ಟುಡಿಯೋ ಒಳಕ್ಕೆ ಬಂದರು. ಅಲ್ಲಿ ಹಾರ್ಮೋನಿಯಂ...

 • IMG-20171016-WA0001

  ಈ ಹೊತ್ತಿಗೆ, ಬೆಂಗಳೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ 15-10-2017 ರಂದು ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ನಾಟಕಕಾರ ಶ್ರೀ ಸಾ. ದಯಾ ಅವರು ರಚಿಸಿದ ‘ಪಾಟಕ್’ ಹಾಗೂ ಕವಿ ಶ್ರೀ ಗೋಪಾಲ ತ್ರಾಸಿ ಅವರ ರಚನೆಯ ‘ಬೇಚಾರ ಶಹರು’ ಪುಸ್ತಕಗಳು ಬಿಡುಗಡೆಗೊಂಡವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಸ್.ಆರ್.ವಿಜಯಶಂಕರ ವಹಿಸಿದ್ದರು. ಡಾ.ಹೆಚ್.ಎಲ್.ಪುಷ್ಪಾ ಹಾಗೂ ಶ್ರೀ ನಾಗರಾಜ ವಸ್ತಾರೆ ಅವರು ಬಿಡುಗಡೆಗೊಳಿಸಿದರು. ಡಾ. ಎಸ್.ಆರ್.ವಿಜಯಶಂಕರ ಮಾತನಾಡಿ ‘ಮುಂಬಯಿಯಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಗಳಿವೆ. ಅವುಗಳ ನಡುವೆ ಬದುಕುವುದಕ್ಕೆ, ಸಹನ...

 • file6wzygdozeo813hlmnjgz

  ಮನೆಯೇ ಪಾಠಶಾಲೆ - ಸುರೇಖಾ ಹೆಗಡೆ ವರ್ಷಗಟ್ಟಲೆ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ಅವರು ‘ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಲಿದ್ದಾರೆ ಋಗ್ವೇದ ವಿದ್ವಾಂಸ ದಾಳಿ ಲಕ್ಷ್ಮೀನರಸಿಂಹ ಭಟ್ಟ.  ಎಳವೆಯಿಂದಲೇ ನನ್ನ ಮುಂಜಾವು ಶುರುವಾಗುತ್ತಿದ್ದುದು ಮಂತ್ರಘೋಷಗಳನ್ನು ಕೇಳುತ್ತಾ. ತಲತಲಾಂತರದಿಂದ ಪೌರೋಹಿತ್ಯವನ್ನೇ ನಂಬಿಕೊಂಡು ಬಂದ ಕುಟುಂಬ ನನ್ನದು. ಇದೇ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡ 47ನೇ ತಲೆಮಾರಿನವ ನಾನು. ಹುಟ್ಟೂರು ಮೈಸೂರು. ಮಹಾರಾಜರ ಕಾಲದಿಂದಲೂ...

 • ಓದಿಗೆ ಬೇಡ ರಜೆ…

  ಓದಿಗೆ ಬೇಡ ರಜೆ… - ಟಿ. ಎ. ಬಾಲಕೃಷ್ಣ ಅಡಿಗ ರಜೆ ಎಂದರೆ ಬರೀ ಮೋಜು, ಮಸ್ತಿ ಮಾತ್ರವಲ್ಲ. ಅದರ ಜೊತೆಗೆ ನಮ್ಮ ಅಭಿರುಚಿಗೆ ತಕ್ಕ ಹಾಗೆ ಒಂದಷ್ಟು ಓದು ಕೂಡ ನಮ್ಮ ಜೊತೆಗಿರಬೇಕು. ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಜೀವನಚರಿತ್ರೆ – ಹೀಗೆ ನಮ್ಮ ಆಸಕ್ತಿ ವಿಷಯಗಳನ್ನು ಕುರಿತಾದ ಪುಸ್ತಕಗಳ ಓದಿನ ಒಲವನ್ನು ಬೆಳೆಸಿಕೊಳ್ಳಬೇಕು. ಮಕ್ಕಳೇ, ಕಳೆದ ನಾಲ್ಕು ತಿಂಗಳಿನಿಂದ ನೀವೆಲ್ಲರೂ ಶಾಲೆಯಲ್ಲಿ ನಿಮ್ಮ ತರಗತಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಇರುವ ಪಾಠಗಳನ್ನು ಕಲಿಯುವುದರಲ್ಲಿ ತೀವ್ರವಾಗಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ....

 • file6x1c9a5k1vpic98ugdw

  ನಾದದ ನೇಯ್ಗೆಗೆ ನೃತ್ಯದ ಸೊಬಗು ರಭಸದಿಂದ ಸುರಿಯುತ್ತಿದ್ದ ಮಳೆಗೆ ಬೆಂಗಳೂರಿನ ಇಳೆ ತಣಿದಿತ್ತು. ತಂಪಾದ ಆ ವಾತಾವರಣದಲ್ಲಿ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ನೃತ್ಯ ಪ್ರದರ್ಶನ ಕಲಾಸಕ್ತರ ಮನ ತಣಿಸುವಲ್ಲಿ ಸಫಲವಾಯಿತು. ಅಲ್ಲಿ ನೆರೆದಿದ್ದ ನೂರಾರು ಬೆರಗುಗಣ್ಣುಗಳು ವೇದಿಕೆಯತ್ತ ದೃಷ್ಟಿ ನೆಟ್ಟಿದ್ದವು. ದೂರದಲ್ಲೆಲ್ಲೋ ಕೇಳುತ್ತಿದ್ದ ಹದವಾದ ಶಬ್ದದೊಂದಿಗೆ ಮನಸ್ಸು ತಾಳ ಹಾಕುತ್ತಿತ್ತು. ನಿಧಾನವಾಗಿ ವೇದಿಕೆಯನ್ನಾವರಿಸುತ್ತಿದ್ದ ಬೆಳಕು ಅರಿಶಿನ ಬಣ್ಣದ ದಿರಿಸು ತೊಟ್ಟ ಕಲಾವಿದರ ಮೇಲೆ ಬಿತ್ತು. ದೂರದಲ್ಲಿಯ ಶಬ್ದಕ್ಕೂ ಕಲಾವಿದರ ಹೆಜ್ಜೆಗೂ ಸಾಂಗತ್ಯ ಶುರುವಾಯಿತು. ಅಲ್ಲಿಂದ...